Sunday, December 21, 2014

ಮಾತೃಭಾಷೆ / ಮನೆ ಭಾಷೆ

ಎಲ್ಲದಕ್ಕೂ ಆಂಗ್ಲ ಭಾಷೆಯನ್ನೇ ಬಳಸುವ ಯುವ ಜನಾಂಗಕ್ಕೆ ಮಾತೃಭಾಷೆ ಕಲಿಸುವ ಅಗತ್ಯವಿದೆಯೇ ? ಖಂಡಿತ ಇದೆ. ಮಾತೃಭಾಷೆ ಮುಖಾಂತರವೇ ಪೋಷಕರ ಸಂಸ್ಕಾರಗಳು ಹೊಸ ಪೀಳಿಗೆಗೆ ತಲುಪಲು ಸಾದ್ಯ. ಮಾತೃಭಾಷೆಯ ಆಯ್ಕೆ ಕಷ್ಟವಾದಲ್ಲಿ ಪೋಷಕರು (ಮುಖ್ಯವಾಗಿ ತಂದೆ ತಾಯಿಗಳು) ಯಾವ ಭಾಷೆ ತಮ್ಮ ಪರಸ್ಪರ ಸಂವಹನಕ್ಕೆ ಬಳಸುತ್ತಾರೋ ಅದನ್ನೇ ಮಗುವಿನ ಮಾತೃಭಾಷೆಯಾಗಿ ಆಯ್ಕೆ ಮಾಡಿಕೊಳ್ಳಬೇಕು.
ಸದ್ಯದ ಪರಿಸ್ಥಿತಿಯಲ್ಲಿ ಆಂಗ್ಲ ಭಾಷೆಯನ್ನೇ ಮನೆಭಾಷೆಯಾಗಿ ಹೊಂದಿರುವವರ ಸಂಖ್ಯೆ ಅತ್ಯಂತ ಕಡಿಮೆ. ಭಾರತೀಯ ಭಾಷೆಗಳನ್ನು ಕಲಿಸದೇ ಹೋದರೆ ಭಾಷೆಗಳ ಅಳಿವಿನ ಜೊತೆಗೆ ಸಂಸ್ಕೃತಿಗಳ ಅಳಿವಿನ ಸಾದ್ಯತೆ ಅತ್ಯಧಿಕ.

ಒಂದು ಉದಾಹರಣೆ ತೆಗೆದುಕೊಳ್ಳುವುದಾದರೆ (ಪ್ರಕಾಶ್ ರೈ ಅವರ ನಾನು ನನ್ನ ಕನಸು), ಕನ್ನಡದವರು ಪಂಜಾಬಿಯನ್ನು ವಿವಾಹವಾದರೆ ಮನೆ ಭಾಷೆಯಾಗಿ ಹಿಂದಿ ಸ್ವೀಕೃತವಾಗಬಹುದು. ನಾವಿಲ್ಲಿ ಭಾಷಾಭಿಮಾನ / ದುರಭಿಮಾನಗಳ ಬಗ್ಗೆ ಗಮನವಹಿಸದೆ ಸಂಸ್ಕಾರಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಬಗ್ಗೆ ಮಾತ್ರ ಚಿಂತಿಸಬೇಕು. ಹಿಂದಿಯನ್ನೇ ಮಾತೃಭಾಷೆಯಾಗಿ ಸ್ವೀಕರಿಸಿ ಮಗುವಿಗೆ ಸಂಸ್ಕೃತಿ ಸಂಸ್ಕಾರಗಳನ್ನು ಪರಿಚಯಿಸಬಹುದು.